ಶನಿವಾರ, ಏಪ್ರಿಲ್ 1, 2023
ಮತದಾನ ಜಾಗೃತಿ ಅಂಗವಾಗಿ ಸೈಕಲ್ ಜಾಥಾ
ಬಳ್ಳಾರಿ,ಏ.1(ಕರ್ನಾಟಕ ವಾರ್ತೆ): ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಅಂಗವಾಗಿ ಮತದಾನದ ಜಾಗೃತಿ ಮೂಡಿಸಲು ಸೈಕಲ್ ಜಾಥಾವನ್ನು ಏಪ್ರಿಲ್ 2 ರಂದು ಬೆಳಗ್ಗೆ 7 ಕ್ಕೆ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರದ ಆವರಣದಿಂದ ಏರ್ಪಡಿಸಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು ಅವರು ತಿಳಿಸಿದ್ದಾರೆ.
ಮತದಾನ ಜಾಗೃತಿ ಮೂಡಿಸುವ ಸೈಕಲ್ ಜಾಥಾವು ಐಟಿಐ ಕಾಲೇಜ್ ಮೈದಾನದಿಂದ ಆರಂಭವಾಗಿ ರೇಡಿಯೋ ಪಾರ್ಕ್‍ನಿಂದ ಸಂತ ಜೋಸೆಫರ ಪ್ರೌಢಶಾಲೆ ಮೂಲಕ ಬೆಳಗಲ್ ಕ್ರಾಸ್‍ನ ಮಾರ್ಗವಾಗಿ ಕೌಲ್‍ಬಜಾರ್ ಪೊಲೀಸ್ ಠಾಣೆ, ಮೊದಲ ರೈಲ್ವೇ ಗೇಟ್ ಮೂಲಕ ಜೋಳದರಾಶಿ ರಂಗಮಂದಿರದಿಂದ ಮೋತಿ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ತಲುಪಲಿದೆ ಎಂದು ತಿಳಿಸಿದ್ದಾರೆ.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ