ಬುಧವಾರ, ಏಪ್ರಿಲ್ 12, 2023

ಬಳ್ಳಾರಿ: ವಿವಿಧೆಡೆ ಪ್ಲಾಸ್ಟಿಕ್ ದಾಳಿ ಬಳ್ಳಾರಿ,ಏ.12(ಕರ್ನಾಟಕ ವಾರ್ತೆ): ನಗರದ ವಾರ್ಡ್ ನಂ.8ರ ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿ ಬಳ್ಳಾರಿ ಟ್ರಾನ್ಸ್‍ಪೋರ್ಟ್ ರೋಡ್‍ವೇಯ್ಸ್‍ನಲ್ಲಿ ಪಾಲಿಕೆ ಸಿಬ್ಬಂದಿ ದಾಳಿ ಮಾಡಿ 750 ಕೆ.ಜಿ ತೂಕದಷ್ಟು ನಿಷೇದಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ನಗರದ ಹಲವಡೆ ಪ್ಲಾಸ್ಟಿಕ್ ಬಳಕೆ ನಿಷೇದಿಸಿದ್ದರೂ ಹೊರ ರಾಜ್ಯದ ಹೈದರ್‍ಬಾದ್‍ನಿಂದ ನಗರದಲ್ಲಿ ನಿಷೇದಿತ ಪ್ಲಾಸ್ಟಿಕ್ ವಸ್ತುಗಳನ್ನು ತರಸಿಕೊಂಡು ಮಾರಾಟ ಮಾಡುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಟ್ರಾನ್ಸ್‍ಪೋರ್ಟ್ ಏಜೆನ್ಸಿಗಳ ಮೇಲೆ ದಾಳಿ ಮಾಡಿ ನಿಷೇದಿತ ವಸ್ತುಗಳು ಸಾಗಾಣಿಕೆ ಮಾಡಿ ಸಿಕ್ಕಲ್ಲಿ ಟ್ರಾನ್ಸ್‍ಪೋರ್ಟ್ ಏಜೆನ್ಸಿಗಳ ಮೇಲೆ ಪ್ರಕರಣ ದಾಖಲಿಸಿ ಅವರ ಪರವಾನಿಗೆಯನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಎಲ್ಲ ಟ್ರಾನ್ಸ್‍ಪೋರ್ಟ್ ಏಜೆನ್ಸಿಗಳಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ