ಗುರುವಾರ, ಏಪ್ರಿಲ್ 13, 2023
ಕೋವಿಡ್ ಸೋಂಕಿತರ ಆರೋಗ್ಯ ಸುರಕ್ಷತೆ ನಿಗಾವಹಿಸಲು ಕಂಟ್ರೋಲ್ ರೂಂ ಆರಂಭ: ಡಿಹೆಚ್‍ಒ ಡಾ.ಹೆಚ್.ಎಲ್.ಜನಾರ್ಧನ
ಬಳ್ಳಾರಿ,ಏ.13(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ನಿಯಂತ್ರಣಕ್ಕಾಗಿ ಮತ್ತು ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೊಂಕಿತರ ಆರೋಗ್ಯ ಕಾಳಜಿ ಬಗ್ಗೆ ನಿಗಾವಹಿಸಲು, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಕೋವಿಡ್ ಕಂಟ್ರೋಲ್ ರೂಂ ಆರಂಭಿಸಲಾಗಿದೆ. ಮೊ.8277856658 ಸಂಖ್ಯೆಯು ಸಂಪರ್ಕಿಸಿದಾಗ ಸೂಕ್ತ ಮಾಹಿತಿ ನೀಡಿ ಸೋಂಕು ನಿಯಂತ್ರಣಕ್ಕೆ ಸಹಕರಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ ಅವರು ತಿಳಿಸಿದರು.
ಜಿಲ್ಲಾಡಳಿತ ಸೂಚನೆಯಂತೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಲ್ಲಿ ದಿನದ ಕರ್ತವ್ಯದ ಅವಧಿಯಲ್ಲಿ ಸೋಂಕಿತರಿಗೆ ಕಂಟ್ರೋಲ್ ರೂಂ ಮೂಲಕ ಕರೆ ಮಾಡಲಾಗುತ್ತಿದ್ದು, ಸೋಂಕಿನ ತೀವ್ರತೆಯು ಇಲ್ಲದೆ ಇದ್ದರೂ ಸಹಿತ ಸಂಭಾವ್ಯ ಕೋವಿಡ್ ನಿಯಂತ್ರಣಕ್ಕಾಗಿ ಸಾರ್ವಜನಿಕರು ಕೈಜೋಡಿಸಬೇಕು.
ಕೋವಿಡ್ ರೂಪಾಂತರ ತಳಿಯ ಸೋಂಕಿನ ಪ್ರಕರಣಗಳು ಈಗಾಗಲೇ ದೇಶಾದ್ಯಂತ ಕಂಡುಬರುತ್ತಿದ್ದು, ಮನೆಯಲ್ಲಿ ಪ್ರತ್ಯೇಕವಾಗಿದ್ದು ಆರೈಕೆ ಪಡೆಯುತ್ತಿರುವವರು ಕರೆ ಮಾಡಿ ಸಲಹೆ ಪಡೆದುಕೊಳ್ಳಬಹುದು.
ಯಾರಿಗಾದರೂ ಕೆಮ್ಮು, ಶೀತ, ನೆಗಡಿ, ಉಸಿರಾಟದ ತೊಂದರೆ, ಕಾರಣವಿಲ್ಲದೆ ಜ್ವರ ಬರುವುದು, ಹಾಗೂ ಕೋವಿಡ್ ಸೋಂಕಿತ ಪ್ರದೇಶಕ್ಕೆ ಭೇಟಿ ಕೊಟ್ಟು ಪುನಃ ಊರಿಗೆ ಬಂದಲ್ಲಿ ದಯವಿಟ್ಟು ಒಮ್ಮೆ ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಕೋವಿಡ್ ಖಚಿತ ಪಟ್ಟಲ್ಲಿ ತಜ್ಞರ ಸೂಚನೆಯ ಮೇರೆಗೆ ಮನೆಯಲ್ಲೇ ಪ್ರತ್ಯೇಕವಾಗಿದ್ದು ಆರೈಕೆ ಪಡೆಯಬಹುದು, ಒಂದು ವೇಳೆ ರೋಗದ ತೀವ್ರತೆ ಹೆಚ್ಚಾದರೆ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಮತ್ತು ನ್ಯೂ ಡೆಂಟಲ್ ಕಾಲೇಜಿನಲ್ಲಿ ಇತರೆ ಕೋವಿಡ್ ಸೋಂಕಿತರನ್ನು ದಾಖಲೆ ಮಾಡಿಕೊಂಡು ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಮನೆಗಳಲ್ಲಿ ಆರೈಕೆ ಪಡೆಯುತ್ತಿರುವವರಿಗೆ ಔಷಧಿಯ ಕಿಟ್‍ಗಳನ್ನು ವೈದ್ಯಕೀಯ ತಂಡ ಮನೆಗಳಿಗೆ ತೆರಳಿ ವಿತರಿಸುತ್ತಿದ್ದಾರೆ. ಕೋವಿಡ್ ಸೋಂಕಿತರು ಅನಗತ್ಯವಾಗಿ ಮನೆಗಳಿಂದ ಹೊರ ಬರದಂತೆ ಕ್ರಮವಹಿಸಿ ಅಲ್ಲದೆ ಸಾರ್ವಜನಿಕರು ರೋಗ ಲಕ್ಷಣಗಳು ಕಂಡುಬಂದವರ ಬಳಿ ಹತ್ತಿರದಿಂದ ಮಾತನಾಡುವುದಾಗಲಿ ಅಥವಾ ಕೈಕುಲುಕುವುದಾಗಲಿ ಮಾಡಬೇಡಿ. ಮತ್ತು ಕಣ್ಣು, ಮೂಗು, ಬಾಯಿಯನ್ನು ಅನಗತ್ಯವಾಗಿ ಮುಟ್ಟಿಕೊಳ್ಳಬೇಡಿ, ಕೈಗಳನ್ನು ಸಾಬೂನು ಮತ್ತು ನೀರಿನಿಂದ ಅಥವಾ ಸ್ಯಾನಿಟೈಸರ್‍ನಿಂದ ತೊಳೆದುಕೊಳ್ಳಲು, ಅಗತ್ಯ ಸಂದರ್ಭಗಳಲ್ಲಿ ಮಾಸ್ಕ್ ಧರಿಸಲು ಕೊರಿದ್ದಾರೆ.
ಅಲ್ಲದೇ ಕಂಟ್ರೋಲ್ ರೂಂನಿಂದ ಪೆÇೀನ್ ಮೂಲಕ ಧೈರ್ಯ ತುಂಬುವ ಕಾರ್ಯವನ್ನು ಮಾಡಲಾಗುತ್ತಿದ್ದು, ನಿಮಗೆ ದೂರವಾಣಿ ಕರೆಗಳು ಬಂದಾಗ ಸಾವಧಾನದಿಂದ ಉತ್ತರಿಸಿ, ನೀಡುವ ಸಲಹೆ ಸೂಚನೆಗಳನ್ನು ಪಾಲಿಸಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೋವಿಡ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರ ಕುಮಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ವೇಂಕೋಬ್ ನಾಯ್ಕ ಸೇರಿದಂತೆ ಸಿಬ್ಬಂದಿ ಮಹೇಶ, ಪದ್ಮಾವತಿ ಇತರರು ಉಪಸ್ಥಿತರಿದ್ದರು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ