ಶುಕ್ರವಾರ, ಜೂನ್ 19, 2026
ಜೂ.20 ರಂದು ವಿದ್ಯುತ್ ಗ್ರಾಹಕರ ಕುಂದು-ಕೊರತೆ ಸಭೆ
ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ):
ಬಳ್ಳಾರಿ ನಗರದ ಜೆಸ್ಕಾಂ ಉಪ-ವಿಭಾಗ 1 ಮತ್ತು 2ರ ವಿದ್ಯುತ್ ಗ್ರಾಹಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ಜೂ.20 ರಂದು ಮಧ್ಯಾಹ್ನ 03 ಗಂಟೆಗೆ ನಗರದ ಹೆಚ್.ಆರ್.ಗವಿಯಪ್ಪ ವೃತ್ತದ ಬಳಿಯಿರುವ ಜೆಸ್ಕಾಂ ವಲಯ ಕಚೇರಿಯ ಮೊದಲ ಮಹಡಿಯ ಸಭಾಂಗಣದಲ್ಲಿ ವಿದ್ಯುತ್ ಗ್ರಾಹಕರ ಕುಂದು-ಕೊರತೆ ಸಭೆ ಆಯೋಜಿಸಲಾಗಿದೆ.
ಜೆಸ್ಕಾಂ ನಗರ ವಿಭಾಗದ (ಕಾರ್ಯ ಮತ್ತು ಪಾಲನೆ) ಕಾರ್ಯನಿರ್ವಾಹಕ ಅಭಿಯಂತರರು (ಇಇ) ಅಧ್ಯಕ್ಷತೆ ವಹಿಸುವರು.
ಬಳ್ಳಾರಿ ನಗರದ ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿ ವಿದ್ಯುತ್ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳಿಗೆ ಸಂಬAಧಿಸಿದ ತಮ್ಮ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ