ಶುಕ್ರವಾರ, ಜೂನ್ 19, 2026

ಬಳ್ಳಾರಿ ಜಿಟಿಟಿಸಿ ಕೇಂದ್ರದಲ್ಲಿ ವಿವಿಧ ಅತಿಥಿ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ): ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಇಲ್ಲಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಬಹುಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಖಾಲಿ ಇರುವ ವಿವಿಧ ವಿಭಾಗಗಳ ಪೂರ್ಣಾವಧಿ ಅತಿಥಿ ಬೋಧಕರ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. *ಬೋಧಕ ಹುದ್ದೆಗಳ ವಿವರ ಹಾಗೂ ವಿದ್ಯಾರ್ಹತೆ:* ಎಲೆಕ್ಟಿçಕಲ್: ಹುದ್ದೆ ಸಂಖ್ಯೆ 02, 3 ರಿಂದ 5 ವರ್ಷಗಳ ಅನುಭವ, ವಿದ್ಯಾರ್ಹತೆ ಡಿಪ್ಲೋಮಾ/ಇಇಇ ಇನ್ ಬಿಇ. ಎಲೆಕ್ಟಾçನಿಕ್ಸ್: 01 ಹುದ್ದೆ, 3 ರಿಂದ 5 ವರ್ಷಗಳ ಅನುಭವ, ವಿದ್ಯಾರ್ಹತೆ ಬಿಇ/ಎಂ.ಟೆಕ್ ಇನ್ ಇ&ಸಿ. ಮೆಕಾನಿಕಲ್: ಹುದ್ದೆ 01, 2 ರಿಂದ 5 ವರ್ಷಗಳ ಅನುಭವ, ವಿದ್ಯಾರ್ಹತೆ ಡಿಪ್ಲೋಮಾ/ಬಿಇ/ಎಂ.ಟೆಕ್/ಡಿಟಿಡಿಎA/ಮೆಕಾನಿಕಲ್. ಕAಪ್ಯೂಟರ್ ಸೈನ್ಸ್: ಹುದ್ದೆ 01, 2 ರಿಂದ 5 ವರ್ಷಗಳ ಅನುಭವ, ಬಿಇ/ಎಂ.ಟೆಕ್ ಇನ್ ಸಿಎಸ್. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ವಿಳಾಸ: ಜಿ.ಟಿ.ಟಿ.ಸಿ., ಐಶ್ವರ್ಯ ಕಾಲೋನಿ (ಐ.ಟಿ.ಐ. ಕ್ಯಾಂಪಸ್), ಕಂಟೋನ್‌ಮೆAಟ್, ಬಳ್ಳಾರಿ - 583104 ಅಥವಾ ಮೊ.9620057086, ದೂ.08392-200087 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಟಿಟಿಸಿ ಸಂಸ್ಥೆಯ ಪ್ರಾಂಶುಪಾಲ ಮುತ್ತಣ್ಣ ದರ್ಮಂತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ