ಗುರುವಾರ, ಜೂನ್ 18, 2026
ಚೋರನೂರು: ಮಸ್ಜಿದ್ ಎ ನೂರ್ ವಖ್ಫ್ ಸಂಸ್ಥೆಗಳ ಸದಸ್ಯತ್ವ ನೋಂದಣಿ ಅವಧಿ ವಿಸ್ತರಣೆ
ಬಳ್ಳಾರಿ,ಜೂ.18(ಕರ್ನಾಟಕ ವಾರ್ತೆ):
ಸಂಡೂರು ತಾಲ್ಲೂಕಿನ ಚೋರನೂರು ಗ್ರಾಮದ ಮಸ್ಜಿದ್ ಎ ನೂರ್, ಈದ್ಗಾ ಮತ್ತು ಖಬರಸ್ತಾನ್ ವಖ್ಫ್ ಸಂಸ್ಥೆಗಳಿಗೆ ಸಾಮಾನ್ಯ ಸದಸ್ಯರ ನೋಂದಣಿ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ನೋಂದಣಾಧಿಕಾರಿಗಳು ತಿಳಿಸಿದ್ದಾರೆ.
*ಅರ್ಜಿ ವಿತರಣೆ ಮತ್ತು ಸಲ್ಲಿಕೆ:*
ಜುಲೈ 03 ರವರೆಗೆ ಪ್ರತಿದಿನ ಬೆಳಿಗ್ಗೆ 10.30 ರಿಂದ ಸಂಜೆ 05.30 ಗಂಟೆಯ ಅವಧಿಯಲ್ಲಿ ಸದಸ್ಯರ ದಾಖಲಾತಿಗಾಗಿ ಅರ್ಜಿ ನಮೂನೆ ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿ ನಮೂನೆಗಳೊಂದಿಗೆ 3 ಇತ್ತೀಚಿನ ಭಾವಚಿತ್ರಗಳು, 100 ರೂ. ಶುಲ್ಕ ಹಾಗೂ ಅಧಿಕೃತ ವಿಳಾಸದ 2 ಗುರುತಿನ ಚೀಟಿಗಳೊಂದಿಗೆ ಜುಲೈ 03 ರ ಮಧ್ಯಾಹ್ನ 03.30 ಗಂಟೆಯೊಳಗೆ ಚೋರನೂರು ಗ್ರಾಮದ ಮಸ್ಜಿದ್ ಎ ನೂರ್ ನಲ್ಲಿ ಸ್ಥಾಪಿಸಲಾಗಿರುವ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು.
ದಾಖಲಾದ ಸದಸ್ಯರ ಕರಡು ಪಟ್ಟಿಯನ್ನು ಜುಲೈ 07 ರಂದು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಗೆ ಸಂಬAಧಿಸಿದAತೆ ಏನಾದರೂ ಆಕ್ಷೇಪಣೆಗಳು ಹಾಗೂ ಸಲಹೆ-ಸೂಚನೆಗಳಿದ್ದಲ್ಲಿ ಜುಲೈ 08 ರಿಂದ ಜುಲೈ 14 ರವರೆಗೆ (ಬೆಳಿಗ್ಗೆ 11 ರಿಂದ ಸಂಜೆ 5.30 ಗಂಟೆಯೊಳಗೆ) ಸಲ್ಲಿಸಬಹುದಾಗಿದೆ. ಸಲ್ಲಿಕೆಯಾದ ಆಕ್ಷೇಪಣೆಗಳ ವಿಚಾರಣೆಯನ್ನು ಜುಲೈ 15 ರಂದು ಬೆಳಿಗ್ಗೆ 11 ಗಂಟೆಯಿAದ ನಡೆಸಲಾಗುತ್ತದೆ.
ದಾಖಲಾದ ಸಾಮಾನ್ಯ ಸದಸ್ಯರ ಅಂತಿಮ ಪಟ್ಟಿಯನ್ನು ಜುಲೈ 18 ರಂದು ಚೋರನೂರಿನ ಮಸ್ಜಿದ್ ಎ ನೂರ್ ಮತ್ತು ಬಳ್ಳಾರಿಯ ಜಿಲ್ಲಾ ವಖ್ಫ್ ಕಚೇರಿಯಲ್ಲಿ ಪ್ರಕಟಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ