ಶುಕ್ರವಾರ, ಜೂನ್ 19, 2026
ಬಾಲಕ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ):
ನಗರದ ಕೌಲ್‌ಬಜಾರ್‌ನ ಮಾರುತಿ ಸ್ಟೋರ್ ಸಮೀಪದ ಗಡಂಗ್ ಸ್ಟಿçÃಟ್ ಅಮ್ಮ ಟೆಂಪಲ್ ಮತ್ತು ಈಶ್ವರ ಗುಡಿ ಹತ್ತಿರದ ನಿವಾಸಿಯಾದ ಶಾಹಿದ್ ಎಂಬ 15 ವರ್ಷದ ಬಾಲಕ ಜೂ.18 ರಂದು ಕಾಣೆಯಾಗಿರುವ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಬಾಲಕನ ಚಹರೆ ಗುರುತು:
ಅಂದಾಜು 4.5 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ತೆಳ್ಳನೆಯ ಮೈ ಕಟ್ಟು, ಬಲಕಣ್ಣಿನ ಕೆಳಗೆ ಮತ್ತು ಬಲಕೈ ಅಂಗೈಯಲ್ಲಿ ಸಣ್ಣ ಕಪ್ಪು ಮಚ್ಚೆ ಇರುತ್ತದೆ.
ಮನೆಯಿಂದ ಕಾಣೆಯಾದ ಸಂರ್ಧಭದಲ್ಲಿ ಗ್ರೇ ಕಲರ್ ಟೀ-ಶರ್ಟ್, ಬಾದಾಮಿ ಕಲರ್ ಪ್ಯಾಂಟ್, ರೆಡಿಮೆಡ್ ಒಳ ಚೆಡ್ಡಿ ತೊಟಿದ್ದು, ಲೈಟ್ ಬ್ಲೂ ಕಲರ್ ಕಾಲೇಜು ಬ್ಯಾಗ್ ನಲ್ಲಿ ಬಟ್ಟೆಗಳು ತೆಗೆದುಕೊಂಡು ಹೋಗಿರುತ್ತಾನೆ. ಕನ್ನಡ ಭಾಷೆ ಮಾತನಾಡುವುದರ ಜೊತೆಗೆ ಹಿಂದಿ ಭಾಷೆಯನ್ನು ಸ್ವಲ್ಪ ಸ್ವಲ್ಪ ಮಾತನಾಡುತ್ತಾನೆ.
ಬಾಲಕನ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145 ಅಥವಾ ಪಿಎಸ್‌ಐ ಮೊ.9480820308, ಪಿಐ ಮೊ.9480803047, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ