ಶುಕ್ರವಾರ, ಜೂನ್ 19, 2026

ಜೂ.21ಕ್ಕೆ ‘ಕಲಾ ನಡಿಗೆ - ನಿಮ್ಮ ಬಳಿಗೆ' ಸಾಂಸ್ಕೃತಿಕ ಕಾರ್ಯಕ್ರಮ

ಬಳ್ಳಾರಿ,ಜೂ.19(ಕರ್ನಾಟಕ ವಾರ್ತೆ): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಜೂ.21 ರಂದು ಸಂಜೆ 6.30 ಗಂಟೆಗೆ ಬಳ್ಳಾರಿ ತಾಲ್ಲೂಕಿನ ಬ್ಯಾಲಚಿಂತ ಗ್ರಾಮದಲ್ಲಿ ‘ಕಲಾ ನಡಿಗೆ - ನಿಮ್ಮ ಬಳಿಗೆ’ ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಜನತೆಗೆ ಕಲಾ ರಸದೌತಣ ನೀಡಲು ಹಮ್ಮಿಕೊಳ್ಳಲಾಗಿರುವ ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಎರಡು ಪ್ರದರ್ಶನಗಳು ಜರುಗಲಿವೆ. ಬಳ್ಳಾರಿಯ ಕುಮಾರಿ ಸಮೀರಾ ಎಸ್.ಕೆ ಮತ್ತು ಸಂಗಡಿಗರಿAದ ಆಕರ್ಷಕ ಸಮೂಹ ನೃತ್ಯ ಪ್ರದರ್ಶನ. ಸಿರುಗುಪ್ಪ ತಾಲೂಕಿನ ಸಿರಿಗೇರಿಯ ‘ಧಾತ್ರಿ ರಂಗ ಸಂಸ್ಥೆ' ವತಿಯಿಂದ ‘ಶ್ರೀ ಕೃಷ್ಣ ಸಂಧಾನ’ ಎಂಬ ಜನಪ್ರಿಯ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಈ ಸಾಂಸ್ಕೃತಿಕ ಸಂಧ್ಯಾ ಕಾರ್ಯಕ್ರಮಕ್ಕೆ ಸಾರ್ವಜನಿಕರೆಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬAಡೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ