ಶನಿವಾರ, ಜೂನ್ 20, 2026
ಗೃಹಲಕ್ಷಿö್ಮ ಮರುನೋಂದಣಿ ವದಂತಿ ನಂಬಬೇಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ಪಷ್ಟನೆ
ಬಳ್ಳಾರಿ,ಜೂ.20(ಕರ್ನಾಟಕ ವಾರ್ತೆ):
ಗೃಹಲಕ್ಷಿö್ಮ ಯೋಜನೆಯಡಿ ಈಗಾಗಲೇ ನೋಂದಾಯಿತರಾಗಿರುವ ಫಲಾನುಭವಿಗಳ ಮರುಅರ್ಜಿ ಅಥವಾ ಮರುನೋಂದಣಿಗೆ ಸಂಬAಧಿಸಿದAತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿದ್ದು, ಸಾರ್ವಜನಿಕರು ಇಂತಹ ವದಂತಿಗಳನ್ನು ನಂಬಬಾರದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ಗೃಹಲಕ್ಷಿö್ಮ ಯೋಜನೆಯ ಮರುನೋಂದಣಿ ಅಥವಾ ಮರುಅರ್ಜಿ ಸಲ್ಲಿಕೆಗೆ ಸಂಬAಧಿಸಿದAತೆ ಬೆಂಗಳೂರಿನ ಪ್ರಧಾನ ಕಚೇರಿಯಿಂದ ಇದುವರೆಗೆ ಯಾವುದೇ ಅಧಿಕೃತ ಆದೇಶವಾಗಲಿ ಅಥವಾ ಮಾರ್ಗಸೂಚಿಗಳಾಗಲಿ ಹೊರಬಿದ್ದಿಲ್ಲ.
*ಕಚೇರಿಗಳಿಗೆ ಅಲೆಯಬೇಡಿ:*
ಸರ್ಕಾರದ ಮುಂದಿನ ಆದೇಶ ಬರುವವರೆಗೆ ಸದ್ಯದ ಫಲಾನುಭವಿಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಯಾವುದೇ ಅವಕಾಶವಿರುವುದಿಲ್ಲ. ಹಾಗಾಗಿ, ಇ-ಕೆವೈಸಿ ಅಥವಾ ಮರುನೋಂದಣಿಗಾಗಿ ಫಲಾನುಭವಿಗಳು ಅನಗತ್ಯವಾಗಿ ಸಂಬAಧಪಟ್ಟ ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕರು ತೊಂದರೆಗೊಳಗಾಗಬಾರದು.
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಹರಡುತ್ತಿರುವ ಸುಳ್ಳು ಸುದ್ದಿಗಳಿಗೆ, ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಮುಂದಿನ ದಿನಗಳಲ್ಲಿ ಇಲಾಖೆಯಿಂದ ಯಾವುದೇ ಹೊಸ ಆದೇಶ ಅಥವಾ ಮಾರ್ಗಸೂಚಿಗಳು ಹೊರಬಂದಲ್ಲಿ, ಅದನ್ನು ಅಧಿಕೃತ ಪತ್ರಿಕಾ ಪ್ರಕಟಣೆಯ ಮೂಲಕವೇ ಸಾರ್ವಜನಿಕರಿಗೆ ತಲುಪಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ