ಗುರುವಾರ, ಜೂನ್ 18, 2026

ಬಳ್ಳಾರಿಯ ಬಿಎಂಸಿಆರ್‌ಸಿಯಲ್ಲಿ ರಾಷ್ಟಿçÃಯ ಶಸ್ತçಚಿಕಿತ್ಸಕರ ದಿನಾಚರಣೆ

ಬಳ್ಳಾರಿ,ಜೂ.18(ಕರ್ನಾಟಕ ವಾರ್ತೆ): ಕೆಎಸ್‌ಸಿ-ಎಎಸ್‌ಐ ಬಳ್ಳಾರಿ ನಗರ ಶಾಖೆ ಹಾಗೂ ಬಿಎಂಸಿಆರ್‌ಸಿ ಸಾಮಾನ್ಯ ಶಸ್ತçಚಿಕಿತ್ಸಾ ವಿಭಾಗದ ಸಹಯೋಗದೊಂದಿಗೆ ಬಳ್ಳಾರಿ ವೈದ್ಯಕೀಯ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ಆವರಣದಲ್ಲಿ ಸೋಮವಾರ ರಾಷ್ಟಿçÃಯ ಶಸ್ತçಚಿಕಿತ್ಸಕರ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ಉಪಯುಕ್ತವಾಗುವಂತೆ ಕೇಸ್ ಪ್ರೆಸೆಂಟೇಶನ್ ಹಾಗೂ ಅಪರೂಪದ ಪ್ರಕರಣ ವರದಿ ಕುರಿತು ವಿಶೇಷ ಶೈಕ್ಷಣಿಕ ಅಧಿವೇಶನವನ್ನು ಆಯೋಜಿಸಲಾಗಿತ್ತು. ಎಎಸ್‌ಐ ಸಂಸ್ಥೆಯು ಯುವ ಮತ್ತು ಉದಯೋನ್ಮುಖ ಶಸ್ತçಚಿಕಿತ್ಸಕರಿಗೆ ನೀಡುತ್ತಿರುವ ಬೆಂಬಲ ಹಾಗೂ ವಿವಿಧ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ ರಾಷ್ಟಿçÃಯ ಕಾರ್ಯದರ್ಶಿ ಡಾ. ಗಡ್ಡಿ ದಿವಾಕರ್ ಕರೆ ನೀಡಿದರು. ಈ ಶೈಕ್ಷಣಿಕ ಸಂವಾದಗಳು ಮತ್ತು ವೈದ್ಯಕೀಯ ಚರ್ಚೆಗಳು ವಿಶೇಷವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಲಿಕೆ, ಸೂಕ್ತ ಮಾರ್ಗದರ್ಶನ ಹಾಗೂ ಅವರ ವೃತ್ತಿಪರ ಅಭಿವೃದ್ಧಿಗೆ ಒಂದು ಅತ್ಯುತ್ತಮ ವೇದಿಕೆಯಾಗಿದೆ ಎಂದರು. ಎಎಸ್‌ಐ ವತಿಯಿಂದ ದೇಶಾದ್ಯಂತ ಕೈಗೊಳ್ಳಲಾಗುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಅವರ ಸೇವೆ ಮತ್ತು ಕೊಡುಗೆಗಳನ್ನು ಗುರುತಿಸಿ, ಕಾರ್ಯಕ್ರಮದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಬಿಎಂಸಿಆರ್‌ಸಿ ನಿರ್ದೇಶಕ ಡಾ.ಟಿ.ಗಂಗಾಧರ ಗೌಡ, ಬಿಎಂಸಿಆರ್‌ಸಿ ಸಾಮಾನ್ಯ ಶಸ್ತçಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಕಾಸಾ ಸೋಮಶೇಖರ್, ಡಾ.ವಿದ್ಯಾಧರ ಕಿನ್ನಾಳ, ಕೆಎಸ್‌ಸಿ-ಎಎಸ್‌ಐ ಖಜಾಂಚಿ ಡಾ. ವೈ. ಗುರುಬಸವನಗೌಡ, ಕೆಎಸ್‌ಸಿ-ಎಎಸ್‌ಐ ಬಳ್ಳಾರಿ ನಗರ ಶಾಖೆಯ ಅಧ್ಯಕ್ಷ ಡಾ. ಶೇಕಪ್ಪ ಸಿ. ಮಾಳಗಿಮನಿ, ಕಾರ್ಯದರ್ಶಿ ಡಾ. ಗುಡೇಕೋಟೆ ರವಿಕುಮಾರ, ಜಂಟಿ ಕಾರ್ಯದರ್ಶಿ ಡಾ. ಶೈಖ್ ಫರ್ಹಾನ್ ಎಂ.ಬಿ., ಖಜಾಂಚಿ ಡಾ. ಅತುಲ್ ಕುಲಕರ್ಣಿ ಸೇರಿದಂತೆ ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಅಧ್ಯಾಪಕರು, ಹಿರಿಯ ಶಸ್ತçಚಿಕಿತ್ಸಕರು, ಸ್ನಾತಕೋತ್ತರ ಹಾಗೂ ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ