ಬುಧವಾರ, ಜೂನ್ 17, 2026

ಮೂಕ ಅನಾಥ ಬಾಲಕನ ಪೋಷಕರ ಪತ್ತೆಗೆ ಮನವಿ

ಬಳ್ಳಾರಿ,ಜೂ.17(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಅಲೆದಾಡುತ್ತಿದ್ದ ಸುಮಾರು 12 ವರ್ಷ ವಯಸ್ಸಿನ ಮೂಕ ಅನಾಥ ಬಾಲಕನೊಬ್ಬ ಪತ್ತೆಯಾಗಿದ್ದು, ಪ್ರಸ್ತುತ ಆತನನ್ನು ಇಲ್ಲಿನ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಬಾಲಕನ ಪೋಷಕರನ್ನು ಪತ್ತೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಸರ್ಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರು ಮನವಿ ಮಾಡಿದ್ದಾರೆ. *ಘಟನೆಯ ವಿವರ:* ಜೂ.06 ರಂದು ಬಳ್ಳಾರಿ ನಗರದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿಯವರು ಈ ಬಾಲಕನನ್ನು ವಶಕ್ಕೆ ಪಡೆದಿದ್ದರು. ಬಾಲಕನ ತಾತ್ಕಾಲಿಕ ಪೋಷಣೆ ಹಾಗೂ ರಕ್ಷಣೆಗಾಗಿ ಅಂದೇ ಆತನನ್ನು ಸರ್ಕಾರಿ ಬಾಲಕರ ಬಾಲಮಂದಿರಕ್ಕೆ ದಾಖಲಿಸಲಾಗಿತ್ತು. ಬಾಲಕನಿಗೆ ಮಾತನಾಡಲು ಬರುವುದಿಲ್ಲ (ಮೂಕನಾಗಿದ್ದಾನೆ) ಹಾಗೂ ಆತನ ವಿಳಾಸದ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಲಭ್ಯವಾಗಿಲ್ಲ. ಯಾವುದೇ ಭಾಷೆಯಲ್ಲಿ ಮಾತನಾಡಿಸಿದರೂ ಆತನಿಂದ ಮಾಹಿತಿ ಸಿಗುತ್ತಿಲ್ಲ ಹಾಗೂ ಆತನಿಗೆ ಓದಲು ಮತ್ತು ಬರೆಯಲು ಬರುವುದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ, ಬಾಲಕನ ವಿಳಾಸ ಪತ್ತೆ ಹಚ್ಚಲು ಆತನ ಹೆಸರಿನಲ್ಲಿ ಆಧಾರ್ ಕಾರ್ಡ್ ನೋಂದಣಿಯಾಗಿದೆಯೇ ಎಂದು ಪರಿಶೀಲಿಸಲಾಗಿದ್ದು, ಈ ಹಿಂದೆ ಯಾವುದೇ ಆಧಾರ್ ನೋಂದಣಿ ಆಗದಿರುವುದು ಕಂಡುಬAದಿದೆ. ಬಾಲಕನ ಚಹರೆ: ಎತ್ತರ 4.2 ಅಡಿ, 40 ಕೆ.ಜಿ, ಸಾಧಾರಣ ಮೈಕಟ್ಟು, ಉದ್ದ ಮುಖ, ಕಪ್ಪು ಮೈ ಬಣ್ಣ, ಕಪ್ಪು ತಲೆ ಕೂದಲು ಇರುತ್ತದೆ. ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಹಳದಿ ಚೆಕ್ ಬಣ್ಣದ ಅಂಗಿಯನ್ನು ಪತ್ತೆಯಾದ ಸಂರ್ಧಭದಲ್ಲಿ ಧರಿಸಿರುತ್ತಾನೆ. ಬಾಲಕನ ಕುಟುಂಬದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿಯ ದೂ.08392-242065, ಬಾಲಮಂದಿರ ಅಧೀಕ್ಷಕರ ಮೊ.9886555312, 8618825644 ಹಾಗೂ ಆಪ್ತ ಸಮಾಲೋಚಕರ ಮೊ.8880466645 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ