ಬುಧವಾರ, ಜೂನ್ 17, 2026

ಕಲ್ಯಾಣ ಕರ್ನಾಟಕದ ಯುವ ವಿಜ್ಞಾನಿಗಳಿಗೆ ಹೊಸ ಆಶಾಕಿರಣ: ವಿವಿ ಕ್ಯಾಂಪಸ್‌ನಲ್ಲಿ ಬಯೋ ಇನ್ನೋವೇಷನ್ ಸೆಂಟರ್-ಪ್ರೊ.ಎA ಮುನಿರಾಜು

ಬಳ್ಳಾರಿ,ಜೂ.17(ಕರ್ನಾಟಕ ವಾರ್ತೆ): ಕಲ್ಯಾಣ ಕರ್ನಾಟಕದ ಭಾಗದಲ್ಲಿ ಹಲವಾರು ಯುವ ಸಂಶೋಧನಾ ವಿಜ್ಞಾನಿಗಳು ಮುಂಚೂಣಿಯಲ್ಲಿದ್ದು, ಅವರಿಗಾಗಿ ಮುಂದಿನ ದಿನಗಳಲ್ಲಿ ವಿವಿಯ ಕ್ಯಾಂಪಸ್‌ನಲ್ಲಿ ಬಯೋ ಇನ್ನೋವೇಷನ್ ಸೆಂಟರ್ ತೆರೆಯಲಾಗುವುದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ ಮುನಿರಾಜು ಅವರು ಹೇಳಿದರು. ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ.ಸಿದ್ದು ಪಿ ಆಲಗೂರ ಸಭಾಂಗಣದÀಲ್ಲಿ ವಿಶ್ವವಿದ್ಯಾಲಯ ಮತ್ತು ಸೆಂಟರ್ ಫಾರ್ ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಆರ್ ಆ್ಯಂಡ್ ಡಿ ಕೋಶವು ಜಂಟಿಯಾಗಿ ಬುಧವಾರ ಆಯೋಜಿಸಿದ್ದ ‘ನ್ಯಾನೋ ಜಾಥಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಬಯೋ ಇನ್ನೋವೇಷನ್ ಸೆಂಟರ್ ಆರಂಭದಿAದ ಕಲ್ಯಾಣ ಕರ್ನಾಟಕ ಭಾಗದ ಯುವ ವಿಜ್ಞಾನಿಗಳಿಗಾಗಿ ನಮ್ಮ ವಿಶ್ವವಿದ್ಯಾಲಯವು ಉತ್ತಮ ವೇದಿಕೆಯಾಗಲಿದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬೆಂಗಳೂರಿನ ಸಿಇಎನ್‌ಎಸ್ ವಿಜ್ಞಾನಿ ಪ್ರೊ.ಸುಭಾಷ್ ಸಿ.ಕೆ ಅವರು ಮಾತನಾಡಿ, ಇಂಡಿಯಾ ನ್ಯಾನೋ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆಯಲ್ಲಿ ಬೆಂಗಳೂರು ಪ್ರಮುಖ ಕೇಂದ್ರವಾಗಿದೆ. ವಿಜ್ಞಾನ ಕ್ಷೇತ್ರದ ಯುವ ಸಂಶೋಧಕರನ್ನು ತಂತ್ರಜ್ಞಾನದಲ್ಲಿ ಸಕ್ರಿಯಗೊಳಿಸುವಲ್ಲಿ ವೇದಿಕೆಯಾಗಿ ಈ ಕೇಂದ್ರವು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು. ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ 12 ರಾಜ್ಯಗಳ 20 ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮವನ್ನು ಕೇಂದ್ರವು ಆಯೋಜಿಸಿದೆ. ಯುವ ವಿಜ್ಞಾನಿಗಳಿಗೆ ಸಂಪೂರ್ಣವಾಗಿ ನಾವೀನ್ಯತೆ ಮತ್ತು ಅನ್ವೇಷಣೆ ಆಧಾರಿತ ತರಬೇತಿಗೆ ಅನುವು ಮಾಡಿಕೊಡುವುದೇ ಕೇಂದ್ರದ ಉದ್ದೇಶವಾಗಿದೆ ಎಂದು ತಿಳಿಸಿದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿ.ಲೋಕೇಶ್, ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಎಂ ಸಾಲಿ, ಅನ್ವಯಿಕ ವಿಜ್ಞಾನ ನಿಕಾಯದ ಡೀನರಾದ ಪ್ರೊ.ಹನುಮೇಶ್ ವೈದ್ಯ, ಶುದ್ಧ ವಿಜ್ಞಾನ ನಿಕಾಯದ ಡೀನರಾದ ಪ್ರೊ.ಖಡ್ಕೆ ಉದಯಕುಮಾರ ವೇದಿಕೆಯಲ್ಲಿದ್ದರು. ವಿವಿಯ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ನಿರ್ದೇಶಕ ಪ್ರೊ.ಕೆ. ಎಸ್ ಲೋಕೇಶ್ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ನಾಝಿಶ್ ನಿರೂಪಿಸಿದರು, ಪ್ರೊ.ಖಡ್ಕೆ ಉದಯಕುಮಾರ ವಂದಿಸಿದರು. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ