ಗುರುವಾರ, ಏಪ್ರಿಲ್ 13, 2023

ಇಪಿಎಫ್‍ಓ ಕಚೇರಿ ಸ್ಥಳಾಂತರ ಬಳ್ಳಾರಿ,ಏ.13(ಕರ್ನಾಟಕ ವಾರ್ತೆ): ಕಾರ್ಮಿಕರ ಭವಿಷ್ಯ ನಿಧಿ ಬಳ್ಳಾರಿಯ ಪ್ರಾದೇಶಿಕ ಕಚೇರಿಯು ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪಾರ್ವತಿ ನಗರದ ಎಸ್‍ಎಲ್‍ವಿ ಟವರ್ಸ್‍ನ ಮೂರನೇ ಮಹಡಿಯಲ್ಲಿನ ಕಚೇರಿಯು ಏಪ್ರಿಲ್ 3ರಿಂದ ನಗರದ ರಾಘವೇಂದ್ರ ಕಾಲೋನಿಯಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಭವಿಷ್ಯ ನಿಧಿ ಭವನಕ್ಕೆ ಸ್ಥಳಾಂತರಗೊಂಡಿದೆ. ಎಲ್ಲಾ ಸರ್ಕಾರಿ ಮತ್ತು ಅರೆ ಸರ್ಕಾರಿ ಪತ್ರ ಹಾಗೂ ಇತರೆ ವ್ಯವಹಾರ ಪತ್ರಗಳನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ, ಭವಿಷ್ಯ ನಿಧಿ ಭವನ, ಸರ್ವೇ.ನಂ.872, 873 ಮತ್ತು 876, ಮುಖ್ಯ ರಸ್ತೆ, 2 ನೇ ಹಂತ, ರಾಘವೇಂದ್ರ ಕಾಲೋನಿ, ಬಳ್ಳಾರಿ-583101 ಇಲ್ಲಿಗೆ ಕಳುಹಿಸಿಕೊಡಬೇಕಾಗಿರುತ್ತದೆ ಎಂದು ಸಹಾಯಕ ಭವಿಷ್ಯನಿಧಿ ಆಯುಕ್ತ ಟಿ.ಎನ್.ನಂದನ್‍ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ